ಆಟರ್ ಬೂಮ್, ಪೆರ್‍ಡೇನಿಯಲ್ ಅಮೆಡ್ಯೂಸ್
 (1790-1855). ಸ್ವೀಡನ್ನಿನ ಕವಿ, ತತ್ತ್ವಜ್ಞಾನಿ ಮತ್ತು ಸಾಹಿತ್ಯದ ಚರಿತ್ರಕಾರ. ಹುಟ್ಟಿದ್ದು ಆಸ್ಟರ್‍ಗಾರ್‍ಲಂಡಿನ ಆಸ್ಟೊ ಎಂಬಲಿ.್ಲ ಸತ್ತದ್ದು ಅಪ್ಸಾಲಾದಲ್ಲಿ. 1805-1815ರವರೆಗೆ ಅಪ್ಸಾಲಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ, ಅಲ್ಲೇ 1828ರಲ್ಲಿ ಪ್ರಾಧ್ಯಾಪಕನಾದ. ಸ್ವೀಡಿಷ್ ಸಾಹಿತ್ಯದಲ್ಲಿ ರೊಮ್ಯಾಂಟಿಕ್ ಅಥವಾ ರಮ್ಯಮಾರ್ಗದ ಪ್ರವರ್ತಕರಲ್ಲಿ ಅವನೂ ಒಬ್ಬ. ಕ್ರಾಂತಿಕಾರಕವಾದ ನೂತನಸಾಹಿತ್ಯಪ್ರಚಾರಕ್ಕೆ ಮೀಸಲಾಗಿದ್ದ ಅರೋರಾ ಎಂಬ ಸಂಸ್ಥೆಗೆ ಅವನು ನಾಯಕನಾಗಿ ಅನೇಕ ಲೇಖಕರಿಗೆ ಮಾರ್ಗದರ್ಶಕನಾಗಿದ್ದ. ಆ ಸಂಸ್ಥೆಯ ಪತ್ರಿಕೆಯಾದ ಫಾಸ್ಪರಸ್‍ನಿಂದ ಅದರೊಡನೆ ಸಂಬಂಧವಿದ್ದವರನೇಕರಿಗೆ ಫಾಸ್ಪರಿಸ್ಟರ್ ಎಂಬ ಹೆಸರು ಬಂದಿದೆ. ಫಾಸ್ಪರಸ್ ಎಂದರೆ ಬೆಳಗಿನ ತಾರೆ ಎಂದರ್ಥ. ಆ ಮಾತು ಈ ಗುಂಪಿನ ಬರಹಗಾರರ ರೀತಿನೀತಿಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ.											
(ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ